Monday, May 11, 2020

ಕುಡುಕರು ಸಾರ್ ನಾವು ಕುಡುಕರು

“ಹದಿ ವಯಸ್ಸು ಹಲಕಟ್ ವಯಸ್ಸು”  ಅಂತಾರ್ ನಮ್ಕಡೆ.

ಆ ವಯಸ್ಸು ದಾಟಿ, ತೇವಳಾಡ್ಕೊಂಡು ಕಾಲೇಜ್ ಮುಗುಸಿ ಕೆಲಸಕ್ಕ ಸೇರಿದ್ದು ಒಂದು ದೊಡ್ಡ ನಗೆಪಾಟಲಿ, ಅದರ ಬಗ್ಗೆ ಇನ್ನೊಂದ ಸಲ ಮರ್ಯಾದಿ ತಕ್ಕೊತೆನಿ, ಇವತ್ತು ನಾನು ಹೇಳಾಕ್ಕ್ಹೊಂಟ್ಟಿದ್ದು  ಬ್ಯಾರೆನ ಮಜಾಕಟ್ಟಾ.

ಕೆಲಸಕ್ಕ ಸೇರಿ ಅಧ೯ ವಷ೯ದ ಮೇಲಾಗಿತ್ತು. ಹಂಗೊ ಹಿಂಗೊ ಚುರುಪಾರು ಉಳಸಿದ್ದ ದುಡ್ಡು, ಗೆಳಯರ ದು(ದೂ)ರಾಲೋಚನೆಯುಕ್ತ ಕೈಗಡದ ದೆಸೆಯಿಂದ ನನ್ನ ಮುಕುಳಿ ಕೆಳಗಡೆ ಒಂದು Pulser bike (I named it as The Beast) ಬಂದು ನಿಂತಿತ್ತು.

ಪೂನಾದಾಗ ಹೇಳೋರು ಕೇಳೋರು ಯಾರು ಇರ್ಲಿಲ್ಲ, ವಾರರಾಂತ್ಯಕ್ಕ ಕಾಯ್ಕೋತ ವಾರಾಪೂರ್ತಿ ಹೂಯ್ ಅನ್ನೊಂಗ ಕೆಲ್ಸಾ ಮಾಡೋದು, ಶುಕ್ರವಾರ ರಾತ್ರಿ ಕಂಪನಿ ಗೇಟಿಂದ ಹೊರಾಗ ಬಿತ್ತು ಅಂದ್ರ The Beast ಸೀದಾ ಮನಿಗ್ಹೋಗಿದ್ದು ಇತಿಹಾಸನ ಇಲ್ಲ, ಶಬರಿ Bar and Restaurant ಅದರ ಫಸ್ಟ ಸ್ಟಾಪ್. Waiter ಕನ್ನಡದವರು, ನನ್ನ ಕಂಡ್ರ ತಟಗ ಪ್ರೀತಿ ಜಾಸ್ತಿನ. ಮಂಗಳೂರು ಕಡೆಯವರಾದ್ರು ಉತ್ತರ ಕರ್ನಾಟಕದ ಕನ್ನಡ ಅವರಿಗೆ ಬಲೂಮೋಜು. “ಓಯ್ ಶ್ರೀ, ಇವತ್ತೆಂತ, ಕಂಭ (full bottle) ಹತ್ಲಿಕ್ಕುಂಟಾ” ಅಂತ ಕೇಳೋರು, ಅದಕ್ಕ ನಾನು “ಹತ್ತದೆನ್ ದೊಡ್ಡ ವಿಚಾರನ ಅಲ್ಲ್ ತಗಿರಿ, ಆದ್ರ ಇವತ್ತು ಕುಂಡಿ (financial) ಗಟ್ಟಿ ಇಲ್ರಿ” ಅಂತಿದ್ದೆ, ಇಬ್ಬ್ರು ಜೋರಾಗಿ ನಗ್ತಿದ್ದ್ವಿ, ಆ ವಾರದ ಮಾತುಕತೆ ಅಲ್ಲಿಗೇ ಮುಗಿತು, ಎಣ್ಣೆ ತಂದು, ಸೈಡ್ ಡಿಶ್, ಡಬರಿ ಗಟ್ಟ್ಲೆ ಹುರಿದಿರೊ ಶೇಂಗಾ, ಕೋಳಿದೊಂದು ಬಿರ್ಯಾನಿ, ಕೊನೆಗೊಂದು ಬಟ್ಟಲು ಬೀಸಿ ನೀರು ಜೋತೆ bill ತಂದಿಟ್ಟ್ರೂ, ಅವರೂ ತುಟಕ್ ಅಂತಿರ್ಲಿಲ್ಲ, ನಾನೂ ಪಿಟಿಕ್ ಅಂತಿರ್ಲಿಲ್ಲ.

ಆವತ್ತು bill ಕಟ್ಟಿ ಮನಿಗ ಹೋಗಬೇಕಾಗಿದ್ದ ಗಾಡಿ ಸಣ್ಣಕ ನೆವಾ ತಗದಿತ್ತು, “ಮಾಮ, ಇಲ್ಲೇ ಒಂದ್ ರೌಂಡ್ ಹೋಗಿಬರೊಣು, ಭಾಳ್ ದಿನ ಆತ್ಲೆ, ಪ್ಲೀಸ್” ಅಂತು. ಆವಾಗಿನ ಕಾಲಕ್ಕ ನನಗ ಅದ ಪ್ರಾಣಸಖಿ, ಅಕಿಗೆ ಇಲ್ಲ ಅನ್ನ್ಲಿಕ್ಕೆ ಮನಸಾಗಲಿಲ್ಲ, “ನಾ ಕುಡದೇನ್ ಲೇ, ಎನರ ಹೆಚ್ಚು ಕಮ್ಮಿ ಆದ್ರ ನಿನ್ ಹಣಿಮ್ಯಾಲ ನೋಡು ಎಲ್ಲಾ”  ಅಂದೆ. ಅಕಿ ಫುಲ್ ಖುಷಿ ಆಗಿ “ಓಕೆ, ಹತ್ತರ ಹತ್ತೋಲೇ ನೀ” ಅಂದ್ಲು.

ಅದು ಯಾವ ಮಾಯದಲ್ಲಿ ಕೊರೆಗಾವ್ ಪಾರ್ಕಗೆ ಹೋಗಿದ್ನೊ ಇವತ್ತಿನವರಗು ನೆನಪಿಲ್ಲ,  ಹೋಗೊ ಅಷ್ಟೊತ್ತಿಗೆ ಸೂರ್ಯ ಅಮೇರಿಕದವರ ನೆತ್ತಿ ದಾಟಿದ್ದ, ಹುಣ್ಣಿಮಿ ರಾತ್ರಿ ಅನ್ನಿಸ್ತದ, ಎನ ನೋಡಿದ್ರು ಮಿರು ಮಿರುಗು. The Beastಗೆ ಸುಸ್ತಾಗಿತ್ತು ಅನ್ನಿಸ್ತದ ಇಲ್ಲಾ ನಂಗ ಹಂಗ ನಶೆ ಇಳಿಳಿಕ್ಕೆ ಹತ್ತಿತ್ತೊ, ಶೌಕಾಷ ಒಂದ ರೋಡ್ ಕ್ರಾಸ್ ಮಾಡಿ ಮನಿ ಕಡಿ ಹೋಗಿ ಬಿತ್ಕೊಂಡು ಮಠ ಸಿನೆಮಾ ನೋಡೊಣನ್ನಿಸ್ತು, ಆವಾಗ ಅಕಿ ನನ್ನ ಕಣ್ಣಿಗೆ ಬಿದ್ದಿದ್ದು, ಮೊದಲ ಹೇಳಿದ್ನಲ್ಲ ಹುಣ್ಣಿಮಿ ಅಂತ, ಅಕಿ ಮಾದಕ ಚೆಲುವಿಗೆ  ನನ್ನ ಕನ್ನಡಕನು ಜೊಲ್ಲು ಸುರಿಸಿತ್ತು. ಅರ್ಧ ತೊಡಿಯಷ್ಟ ಕಾಣ್ಹೊಂಗ ತೀಳಿನೀಲಿ jeans, ಶುಬ್ರಾತಿಶುಭ್ರ ಬಿಳಿ ತೋಳಿಲ್ಲದ ಅಂಗಿ, ದಂಗು ಹೋಡದು ನಿಂತಬಿಟ್ಟೆ, ದೂರದಲ್ಲೆಲ್ಲೋ ಮರಾಠಿ ಹಾಡು “ಅಪ್ಸರಾ ಆಲಿ”. ಯಾವ ಪುಣ್ಣಾತ್ಮನ ಹಿಂದ ಕುಂತು ಎಲ್ಲಿಗ ಹೋಂಟಿದ್ಲೊ, ನನ್ನ ಮನಸ್ಸಿಗೆ “ಇವತ್ತು ಬಿಟ್ಟಿ, ನೀ ಕೆಟ್ಟಿ” ಅನಸಿರಬೇಕು, ಮೆದಳಿಂದ ಸೀದಾ The Beastಗೆ ಸಿಗ್ನಲ್ ಹೋಗಿತ್ತು. ನನ್ನ ಪುಣ್ಯ ದೊಡ್ಡದು, ಅವಂದು pulser. ಮುಂದಿನ ಟ್ರಾಫಿಕ್ ಸಿಗ್ನಲ್ನಾಗ ಸಿಕ್ಕ, ಕೆಂಪಿತ್ತು ಲೈಟ, ಬಾಜೂಕ The Beast ನಿಲ್ಸಿದೆ, “ಕನಕ” ಅಂತ ಬರದಿತ್ತು, ಸುಡ್ಲಿ, ಕನ್ನಡದೋರು, ನನ್ನ The Beast 180CCಯಿಂದ 350CCಗೆ upgrade ಆಗಿತ್ತು.

ಅಮುಲ್ ಬೇಬಿ(110kgದು) ಮುಖ ಮಾಡಿ “ಈ ಕರ್ವೆ ನಗರ್ ಗೆ ಹೇಗೆ ಹೋಗೊದು, ಸ್ವಲ್ಪ ಹೇಳ್ತಿರಾ” ಬರದ ಬೆಂಗಳೂರು ಕನ್ನಡದಾಗ ಅಮಾಯಕವಾಗಿ ಕೇಳ್ದೆ. ಆಕಿ ನನ್ನ ಕನ್ನಡ ಕೇಳಿ ಅರ್ಧ ಖುಷಿ, ಅರ್ಧ ಆಶ್ಚರ್ಯದಾಗ  “ಸರ, ಅದು ಭಾಳ ದೂರೈತಿ, ಒಂದ ಕೆಲ್ಸ ಮಾಡ್ರಿ, ಔಂದವರಗು ನಮ್ಮ ಹಿಂದಗುಟ ಬರ್ರಿ, ಅಲ್ಲಿಂದ ಸಲಿಸು”. ಸರ್ವಜ್ಞಾನ ಖುದ್ದು ಬಾಜೂಕ ಬಂದು ಸ್ವರ್ಗಕ್ಕೆ ಕಿಚ್ಚು ಹಚ್ಚಿದ್ದ.
ನಾನು :“ಇಲ್ರಿ, ನಾ ಲಗೂನ ಹೋಗಬೇಕು, ದಾರಿ ಹೇಳ್ರಿ ಸಾಕು” .
ಅಕಿ: “ಹಂಗಾದ್ರ, ಸೀದಾ ಹೋಗ್ರಿ, signal ಸಿಗ್ತದ, ಬಲಕ್ಕ ತೋಗೊಂಡು 16km ಸರಳ ಹೊದ್ರ ವಾಕಡ ಬ್ರಿಡ್ಜ್ ಸಿಗ್ತದ, ಅಲ್ಲಿಂದ ಎಡಕ್ಕ 2೦km ಹೋದ್ರ ವಾರಜೆ”
ಅಕಿ ಹೇಳೊದು ಕೇಳಸ್ಕೊಂಡೋರು ಯಾರು, ಮುಖ ತುಂಬಿದ ಬೆಳದಿಂಗಳು. ನೋಡ್ತಾನ ಇರಬಕು, ಹಗಲು-ರಾತ್ರಿ.
ನಾನು: “ಅರ್ಥಾತ ಬಿಡ್ರಿ” The beast ಹೊಂಟತು ಮುಂದಕ್ಕ, ಮುಂದಿನ ಸಿಗ್ನಲ್ ಬರೋಷ್ಟತ್ತಿಗೆ ಮನಸು ಅರ್ಧ ಬೆಂದಿರೊ ಶೇಂಗಾಕಾಳು. ಇನ್ನೊಂದು ಸಲ ನೋಡೊಣ ಅಂತ - ನನ್ನ ಮನಸ್ಸು, The Beast ಮತ್ತು ನನ್ನ ಕನ್ನಡಕ ಅವಿರೋಧಕ ಮತ ಚಲಾಯಿಸಿದ್ವು. ಮತ್ತದ ಅಮುಲ್ ಬೇಬಿ ಮುಖ ಮಾಡ್ಕೋಂಡು ನಿಂತೆ. ಅಕಿನೂ ಅವಂಗೂಡ ಬಂದು ನಿಂತ್ಕೊಂಡ್ಲು, ಅಂವಂದು ಸ್ವಲ್ಪ ಸಿಟ್ಟಿನ ಮಾರಿ ಆಗಿತ್ತು,
 ಅಕಿ: “ಮತ್ತೇನಾತ್ರಿ, ಅದಕ್ಕ ಹೇಳಿದ್ದು, ಔಂದವರಗೂ ನಮ್ಮ ಹಿಂದಗುಟ ಬರ್ರಿ ಅಂತ”
ಅವ: “ವೆನ್ನೆಲ, ಕರೆಟ್ಗ ಚಪ್ಪು ವಾಳ್ಳಿಕಿ”.
ವೆನ್ನೆಲ ಅಕಿ ಹೆಸರು, ಆಂಧ್ರದವರು ನಮ್ಕಡೆ ಬಂದು ಭಾಳ ವರ್ಷ ಆಗಿತ್ತೇನೋ. ರೂಪಕ್ಕ ತಕ್ಕ ಹೆಸರು, ಬೆಳದಿಂಗಳು ಅಂತ ಅರ್ಥ, ನಾವು ಪೂರ್ಣಿಮಾ, ಪೌರ್ಣಿಮೆ, ತೇಜಸ್ವೀನಿ ಅಂತೆಲ್ಲ ಇಡ್ತೆವಿ.
ನಾ: “ಇಲ್ಲಿಂದ ಬಲಕ್ಕೊ, ಎಡಕ್ಕೋ, confuse ಆಯ್ತು, ಮುಂದಿಂದೆಲ್ಲ ನೆನಪಿದೆ”.
ನಕ್ಕಳು ನೋಡ್ರಿ ಆವಾಗಕಿ, ಸುಹಾಸಿನಿ “ಅಮೃತವರ್ಷಿಣಿ”ಲಿ  ನಗೋಬೇಕಾದ್ರ ನಾನು ರಮೇಶ್ ಆಗಿ “ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ” ಭ್ರಮಾತೀತ.
ಮತ್ತ ಮುಂದಿನ ಸಿಗ್ನಲ್ ಗೆ ಮತ ಚಲಾವಣೆ, ಅವಿರೋದ ಆಯ್ಕೆ, ಅಮುಲ್ ಬೇಬಿ ಮುಖ, ಅಕಿ ನಗೋದು, ಕಿವಿಯಾಗ “ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ”, ಭ್ರಮಾತೀತ.
ಮತ್ತ ಮುಂದಿನ ಸಿಗ್ನಲ್, ರೀಪೀಟ್, “ಬೆಳದಿಂಗಳಾಗಿ ಬಾ, ತಂಗಾಳಿಯಾಗಿ ನೀನು”, ಭ್ರಮಾತೀತ.
ಮತ್ತ ಮುಂದಿನ ಸಿಗ್ನಲ್, ಆ ದಿಕ್ಕಿಗೆ ದುರ್ಗಾ ಕೆಫೆ, ಬೇಕಾದ್ದಾಗ್ಲಿ, ಹೊಲ ಹೋಗಿ ಮನಿ ಉಳಿಲಿ, ಅಕಿಗ ಒಂದು ಕೋಲ್ಡ್ ಕಾಫಿ ಕುಡಸಿ ಪರಿಚಯ ಮಾಡ್ಕೊಳ್ಳೊದ ಸೈ. “ಹುಣ್ಣಿಮೆ ಚಂದಿರನ ಹೆಣ ಬಂತು ಮುಗಿಲಾಗ ತೇಲುತ ಅಗಲ”, ಮ್ಯಾನೇಜರ್ ಫೋನ್ ಮಾಡಿದ್ರ ಕಾಲರ್ ಟ್ಯೂನ್ ಅದು. ಒಲ್ಲದ ಮನಸಿಂದ ಎತ್ತಿದೆ, “ಶ್ರೀ, ಈವತ್ತು ಶುಕ್ರವಾರ, 9:30  ಆಗೋಗಿದೆ already, 10:30 meeting ನೆನಪಿದೆ ತಾನೆ, ನೀಂದೆ ಇವತ್ತು presentation, ಬೇಗ ಬಂದಬಿಡಮ್ಮ ಪ್ಲೀಸ್”.

ಸಿಡಿಲ ಬಡಿದಂಗಾಗಿತ್ತು, ಕಣ್ಣುಜ್ಜಕೋಂಡು ನೋಡಿದ್ರ, ಮೈಲಿಗೆ ಹಾಸಿಗೆ, ಜೊಲ್ಲು ಬಾಯಿ, ಕಂಡಿದ್ದೆಲ್ಲಾ ಕನಸು ಅಂತ ಜ್ಞಾನೋದಯ ಆಗಿದ್ದು ಕಮೋಡ ಮ್ಯಾಲ ಒಗಿಯಾಕ ಕುಂತಾಗ. ಆಫೀಸ್ ಮುಗುಸಿ ಶಬರಿಗೆ ಹೋದೆ, “ಓಯ್ ಶ್ರೀ, ಇವತ್ತೆಂತ, ಕಂಭ (full bottle) ಹತ್ಲಿಕ್ಕುಂಟಾ” .......



Sunday, July 7, 2013

Goa, again !!!!!




ಎಲ್ಲರ ಮನಸ್ಸು ತಾಜಾ ತಂಗಾಳಿ ಬಯಸಿತ್ತು, ಪ್ರತಿದಿನಗಳ ಜಂಜಾಟದಿಂದ, ಕಣ್ಣಿಗೆ ಕಾಣುವ ಅದೇ ನೋಟಗಳಿಂದ, ಬೆಟ್ಟಿಯಾಗುವ ಅದೇ ಮನುಷ್ಯರಿಂದ ಒಂದೇ ಒಂದು ಪುಟಾಣಿ ವಿರಾಮಕ್ಕೆ ಹಾತೋರೆಯುತಿತ್ತು. ಪ್ರತೀ ತಿಂಗಳು ೧೩ ಕ್ಕೆ ಖಡಾಖಂಡಿತವಾಗಿ ಬೆತ್ತಿಯಾಗುವ ನಾವು ೫ ಗೆಳೆಯರು ಒಮ್ಮತದಿಂದ ಒಪ್ಪಿದ ಏಕೈಕ ನಿರ್ದಾರ, ೩ ದಿನಗಳ ಗೋವಾ ಪ್ರಯಾಣ.


Monday, August 30, 2010

ಮುಖ ಮುಸುದಿ ಮಾರಿ ಮೊಗ

"ಧಾರವಾಡ ಭಾಷೆ"
ಹೆ೦ಗರ ಇರವಲ್ದ್ಯಾಕ ಅಕೀ ಮುಸುಡಿ,
ನಾನ ಇರಬೇಕು ಅಕೀ ಮನಸೀಡಿ ......

"ಮ೦ಡ್ಯ ಭಾಷೆ"
ಹೆ೦ಗಿದ್ರೆ ಎನು ಮಗಾ,
ಕೊಟ್ರೆ ಸಾಕು ಅವಳ ಮನಸ್ಸಲ್ಲಿ ನನ್ಗೆ ಜಾಗಾ ...

"ಮ೦ಗಳೂರು ಭಾಷೆ"
ಹೇಗಾದರೂ ಇರಲಿ ಅವಳ ಮುಖ ಮಾರಾಯ
ನನಗೆ ಬ೦ಗಾರದ ಅರಮನೆ ಆಕೆಯ ಹ್ರಿದಯ

(ಮು೦ದುವರೆಯುತ್ತದೆ)

Saturday, August 28, 2010

ಮಥೆರಾನ್ 2008

ಮಥೆರಾನ್, ಒಂದು ಸುಂದರ ದೃಶ್ಯಗಳ ಸುರಿಮಳೆ, ಪೋಲಿ ಜೋಕುಗಳ ಗಂಟು, ಮನಸ್ಸು ಮುಗಿಲಿಗೆ ಹೋಗಿ ಮೋಡಗಳನ್ನು ಮುಟ್ಟಿದ ಅನುಭವ. ಸಖತ್ introvert ಆಗಿದ್ದ ನಂಗೆ corporate ಲೈಫ್ ಅಲ್ಲಿ entry ಆದ ಮೇಲೆ ಎರೆಡನೆ trip.


ರವಿ ಮಾಮ, ಶಂಕ್ರಣ್ಣ ಪುಣೆಗೆ ಬಂದ ಹೊಸದರಲ್ಲಿ  ಸಿಗೋಣ ಅನ್ಕೊಂಡ್ವಿ, ಆದರೆ ಸಿಕ್ಕಾಪಟ್ಟೆ lazy ಆಗಿರೋ ನಂಗೆ ಅದು ಆಗಲೇ ಇಲ್ಲ. Email ಅಲ್ಲೇ ನಮ್ಮ ಮಾತು ಕಥೆ ನಡೀತಾ ಇತ್ತು. ಒಂದು ದಿನ ರವಿ ಮಾಮ ಮಾಥೆರಾನ್ trip ಹೋಗುವಾ ಮಾಮ ಅಂಥ ಹೇಳಿದ, ಸರಿ ರವಿವಾರ ಹೊರಡೋದು ಅಂಥಾಯ್ತು :)

ಬೆಳಿಗ್ಗೆ ೪ ಘಂಟೆಗೆ ಎದ್ದು ಬಿಸಿ ನೀರಲ್ಲಿ ಸ್ನಾನ ಮುಗುಸ್ಕೊಂಡು ೫ ಘಂಟೆಗೆ ಸಿದ್ಧ. ೬ ಆಯಿತು, ೭ ಆಯಿತು ಮಾಮಗಳ ಪತ್ತೇನೇ ಇಲ್ಲ :( ಅಷ್ಟರಲ್ಲಿ ನಂದು ಒಂದು jump ನಿದ್ದೆ ಆಗಿತ್ತು . ಸರಿ ಸುಮಾರು ಏಳು ವರೆ ಗೆ ನನ್ನ mobile ರಿ೦ಗಾಯಿಣಿಸಿತು. ಆ ಕಡೆಯಿ೦ದ ರವಿ ಮಾಮ, ಮಾಮ chowk ಗೆ ಬಾ, ಹೊರಡುವಾ ಅ೦ದಿದ್ದ :)

ಸದಾ ಮುಗುಳ್ನಗುವ ದೀಪ, Eucs(famous for her looks), ಶ೦ಕ್ರಣ್ಣ,(ಅವ೦ದ ಭಾಷೆಯೊಳಗ ಹೇಳ್ಬೇಕಂದ್ರ Classic  ದೋಸ್ತ ), ರವಿ ಮಾಮ (for no reasons, I truly admire him !!!), ಥೋ೦ಮಬ್ರೆ (ಕೆಟ್ಟ ಉಡಾಳ್) ....

ಗಾಡಿ ಅಲ್ಲಿ ತಿ೦ದ ಆ ಬ್ರೆಡ್ ಜ್ಯಾಮ್, ದಾರಿಯಲ್ಲಿ ಮುಕ್ಕಿದ ವಡಾಪಾವ್ , ಮಾಥೆರಾನ್ ಬೆಟ್ಟದ ಮೇಲೆ ಕುದುರೆ ಸವಾರಿ, ನನ್ನ ಹೊಟ್ಟೆ ಕೆಟ್ಟು ಹೋಗಿದ್ದು, ದೀಪಾ- ತೋ೦ಬರೆ ಯಾ ಜೋಕುಗಳು, ರವಿ ಮಾಮನ, ಶಂಕ್ರಣ್ಣನ ನಗು, ರೆಸಾರ್ಟ್ ಅಲ್ಲಿ ಖಾಲಿ ಮಾಡಿದ ಚಿಕನ್, Eucs ನ  "Bring the veg biriyani" dialogue ..... ಸಮಯ ಸಿಕ್ಕಾಗ ಇನ್ನೋಷ್ಟು ಬರೀತೀನಿ 

                                                           (ಮು೦ದುವರೆಯುತ್ತದೆ.)



ಗುಬ್ಬಚ್ಚಿ

ಆ ಭಾಸ್ಕರ
ನಿನಗೊಸ್ಕರ
ಬ೦ದನಾ ಈ ದಿನಾ

ಅರಳಿದವು
ಆ ಸಾಲು ಹೂವು
ಕಾರಣವು ಅವಳ ನಗುವು.