ನಾವು ಚಿಕ್ಕವರಿದ್ದಾಗ ಏನ್ ಏನ್ ಆಡಿಲ್ಲಾ ಹೇಳಿ. ಕುಂಟಾ ಪಿಲ್ಲೆ, ಮರಕೋತಿ, ಕಣ್ಣಾ ಮುಚ್ಚಾಲೆ, ಚೌಕಾ, ಲಗೋರಿ ಮತ್ತಿನ್ನೇನೋ... ಆಯಾ ವಯಸ್ಸಲ್ಲಿ ಆಯಾ ಆಟಾ ಆಡಿ ನಮ್ಮ ಅಣ್ಣಾ ಅಕ್ಕಾ ಏನ್ ಆಡ್ತಿದ್ದಾರೆ ಅಂಥಾ ಕದ್ದು ಇಣಿಕಿ ನೋಡಿ ನಾವು ಆಟ ಆಡಿ ಏನೂ ಗೊತ್ತಾಗದೆ ಕೈ ಕಾಲು ಗಾಯ ಮಾಡ್ಕೊಂಡಿದ್ದು ಜಾಸ್ತಿ. ಗಾಯಾ ಮಾಡ್ಕೊಂಬಂದಿದಿಯಾ ಅಂಥ ಅಪ್ಪ ಅಮ್ಮನ ವದೆ ತಿಂದಿರೋದು ಇದೆ, ಗಾಯಕ್ಕೆ ಅಳೋದ ಅಪ್ಪ ಅಮ್ಮ ಹೊಡದ್ರಲ್ಲ ಅಂಥಾ ಅಳೋದಾ...
ಆ ವಯಸ್ಸಿಗೆ ಎಲ್ಲರೂ ಬೇಕಿತ್ತು, ಒಂದು ನಿಮಿಷದಲ್ಲಿ ನಿನ್ ಜೊತೆ ಇನ್ನು ಮಾತಾಡಲ್ಲಲೇ ಅಂಥಾ ಭಯಾನಕವಾಗಿ ಜಗಳ ಮಾಡಿ ಹತ್ತು ನಿಮಿಷಾನು ಆಗಿರಲಿಲ್ಲ, ಇಬ್ಬರು ಹೆಗಲು ಮೇಲೆ ಕೈ ಹಕ್ಕೊಂಡು ಹುಣಿಸೆ ಹಣ್ಣಿನ ಹುಳಿ ಚಿಗುಳಿ ತಿಂದಿದ್ದು ಈಗ ಸಿಹಿ ನೆನಪು.
ಆದರೆ ಇವತ್ತಿನ ಮಕ್ಕಳನ್ನು ನೋಡಿದ್ರೆ ಸ್ವಲ್ಪ ಬೇಸರವಾಗುತ್ತೆ, ಅವರಿಗೆ ಖಾಲಿ ಸಮಯವೇ ಇಲ್ಲ, ಇದ್ದರೂ ಅದು YouTube ಅಲ್ಲೋ ಯಾವದೋ PlayStation ಅಲ್ಲೋ ಕಳೆದು ಹೋಗ್ತಿದೆ. ನಾನು ಅದು ಕೆಟ್ಟದ್ದು, ಒಳ್ಳೇದು ಅಂತ ಹೇಳ್ತಿಲ್ಲ ಆದ್ರೆ ನನ್ನ ಅನಿಸಿಕೆಗಳು, ನನ್ನ ಗಮನಕ್ಕೆ ಬಂದದ್ದು ಹೀಗಿವೆ.
ಕಣ್ಣಾ ಮುಚ್ಚಾಲೆ ಅಲ್ಲಿ ನಾವು ಕಟ್ಟಿಗೆಯ ಕಪಾಟಿನ ಚಿಕ್ಕದೊಂದು ಮೂಲೆಯಲ್ಲಿ ಬಚ್ಚಿಟ್ಟುಕೊಂಡು ಉಸಿರು ಬಿಗಿ ಹಿಡಿದು ನಿಶ್ಯಬ್ದವಾಗಿ ಕೂತಿದ್ದಾಗ ನಮ್ಮ ಮನಸ್ಸಿಗೆ ಇನ್ನೆಂದೂ CASTROPHOBIA ಬರದಂತೆ ಅತೀ ಸಲೀಸಾಗಿ ತಳ್ಳಿ ಹಾಕಿಬಿಟ್ಟಿದ್ದೆವು.
ಮರಕೋತಿ ಆಡುವಾಗ ಮರವನ್ನ ಹತ್ತಿದ್ದು, ಬಿದ್ದು ಗಾಯ ಮಾಡಿಕೊಂಡು ತದನಂತರ ಮತ್ತೇ ಏನೂ ಆಗೇ ಇಲ್ಲವೇನೋ ಎಂಬಂತೆ ನಮ್ಮ ಕಣ್ಣೀರನ್ನು ನಾವೇ ಒರೆಸಿಕೊಂಡು ಮರವನ್ನಾ ಮರಳಿ ಏರಿದಾಗ hieghtophobia ಯಾವುದೋ ಪರ್ವತಾವನ್ನೇರಿ ಅಲ್ಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ನಮ್ಮ ಗಮನಕ್ಕೆ ಬರಲೇ ಇಲ್ಲ ನೋಡಿ.
ಕಬ್ಬಡ್ಡಿ, ಖೋ ಖೋ ಆಡಿದ್ದಾಗ ನಮ್ಮ ಎರಡನೇ ಹೃದಯವಾದ ಮೀನಖಂಡದ ಮೇಲೆ ಆದ ವ್ಯಾಯಾಮವಂತೂ ಇಂದಿಗೂ ನಮ್ಮ ಕೈ ಹಿಡಿದಿದೆ ಎಂದರೆ ನಂಬುವರಾರು? ಆದರೆ ಆ ಕ್ರೀಡೆಗಳು ಕಲಿಸಿದ ಸಾಂಘಿಕ ಪ್ರಯತ್ನ, ತಂತ್ರಗಾರಿಕೆ ಮತ್ತ್ಯಾವ team building activity ಹೇಳಿಕೊಡಬಲ್ಲದು , ನಮಗಿವ್ಯಾವುದು ಪ್ರಾಮುಖ್ಯವೇ ಆಗಲಿಲ್ಲ, ಗೆದ್ದರೆ ಒಂದು ಹಂಡೆ ಹಾಲು ಸಿಗುತ್ತಿತ್ತು ಇಲ್ಲದಿದ್ದರೆ P.T ಮಾಸ್ತರು ಇನ್ನೆಷ್ಟು ಓಡಿಸಿ ಆಡಿಸುವರೋ ಎಂಬ ದುಗುಡ.
Stress management ಅನ್ನು ಹೇಳಿ ಕೊಟ್ಟ ನಮ್ಮ P.T ಮಾಸ್ತರರಿಗೆ ಸಾಷ್ಟಾಂಗ ನಮಸ್ಕಾರ.
ಚೌಕ ಇಂದು ಲಿಡೋ, ಜೂಜು ರೂಪ ತಾಳಿದೆ ಆದರೆ ಅದು ಕಲಿಸಿದ ಗಣಿತ ಅಷ್ಟಿಷ್ಟಲ್ಲ. ಸಂಕಲನ, ಋಣಾಕಾರ, ಮೂರು ಆರರ, ನಾಕು ಎಂಟರ ಮಗ್ಗಿ ಎಷ್ಟು ಸುಲಲಿತವಾಗಿ ನಮ್ಮ ದಿನನಿತ್ಯದ ಸಂಜೆಯ ಒಂದು ಭಾಗವಾಗಿ ಹೋಗಿತ್ತು.
ಇನ್ನು ಲಗೋರಿಗೆ ಬರುವ, ದಿನಕ್ಕೆ ಎಷ್ಟು ಸಲ ನಿಮ್ಮ ಮಕ್ಕಳು ಮಂಡಿಯೂರಿ, ಅರ್ಧ ಬಾಗಿ, ದೃಷ್ಟಿಯನ್ನು ಪೂರ್ತಿ ಕೇಂದ್ರೀಕರಿಸಿ ಗುರಿ ಇಟ್ಟು ಆಡಿದ್ದುಂಟು, ಇನ್ನೊಬ್ಬ ನಿಮ್ಮ ಗೆಳೆಯ ಕಲ್ಲನ್ನು ಜೋಡಿಸುವಾಗ ಎದುರಾಳಿ ಗುಂಪನ್ನು ವಿಕರಿಸಿ, ಲಗೋರಿ ಎಂದು ಗಂಟಲು ಕಿತ್ತು ಹೋಗುವ ಹಾಗೆ ಕಿರಿಚುವಾಗ, Eye Hand moment and alignment ಅಂದರೆ ಗೊತ್ತಾಗುತ್ತಿತ್ತಾ, ಆ ಕ್ಷಣದಲ್ಲಿ ನಮ್ಮ ಗುರಿ ಇದ್ದಿದ್ದು ಒಂದೇ, ಚೆಂಡು ನಮಗೆ ಬೀಳದಂತೆ ಚಡ್ಡಿಯನ್ನು ಬಿಗಿ ಹಿಡಿದುಕೊಂಡು ಒಂದೇ ಸಮನೆ ಓಡುವುದು. ಚೆಂಡು ಸಿಕ್ಕಾಗ ಚೆಂಡು, ಇಲ್ಲವೇ duster ಅದು ಇಲ್ಲವಾ, ಒಂದು ಸಣ್ಣ ಕಲ್ಲನ್ನು ಹಾಳೆಯ ಮುದ್ದೆಯಲ್ಲಿ ಸುತ್ತಿ ಚೆಂಡು ತಯಾರಿಸಿದಾಗ Business Continuity Plan, Emergency handling ಅಂದರೆ ಗೊತ್ತಾಗುತ್ತಿತ್ತಾ.
ಈ ಅಂಕಣದ ಮುಖ್ಯ ಉದ್ದೇಶ ಮರೆಯಾಗುತ್ತಿರುವ ಕ್ರೀಡಾ ಮನೋಭಾವ. ಸಣ್ಣವರಿದ್ದಾಗ ನಾವು ಎಲ್ಲಾ ಸಣ್ಣಾನೆ ಇದ್ವಿ, ಈಗ ಸ್ವಲ್ಪ ತೂಕ ಜಾಸ್ತಿ ಆಗಿದೆ, ದೇಹಕ್ಕೂ ಹಾಗು .... 😬
ನಿಮ್ಮ ಯಾವ ಆಟ ನಿಮ್ಮನ್ನು ಹೇಗೆ ಪಜೀತಿಗೆ ಸಿಕ್ಕಿಸಿ ಈಗ ನೀವು ಅದನ್ನು ನೆನೆದು ಮನಸಾರೆ ನಕ್ಕು ನಲಿಯುವಿರಿ,
ಕೆಳಗೆ ನಮೂದಿಸಿ
TBC.....
3 comments:
ತುಂಬಾ ಚೆನ್ನಾಗಿದೆ ಹೀಗೆ ಮುಂದುವರೆಸು.ಬಾಬಣ್ಣ ನೀನು ಹೈಸ್ಕೂಲ್ ನಲ್ಲಿ ಇದ್ದಾಗ ಕವನ ಬರೀತೀದ್ದೆಲ್ಲ ಅದು ನೆನಪಾಯ್ತು.ಇದೊಂದು ಒಳ್ಳೆಯ ಪ್ರಯತ್ನ
ಎಲ್ಲಾ ನಿಮ್ಮ ಹಾಗೂ ಕಾಕಾ ಅವರ ಆಶೀರ್ವಾದ
ಚೆನ್ನಾಗಿ ಬರೆದಿದ್ದೀ… ಇದು ಇಂದಿನ ಕಹಿ ಸತ್ಯ .. ಈಗ ಹ್ಯಾಂಡ್ eye co ordination ಅಂತ ಲಕ್ಷ ಲಕ್ಷ ಕೊಟ್ಟು pre school ಕಳಿಸಬೇಕಾಗಿ ಬಂದಿದೆ 😒
Post a Comment